ಶನಿವಾರ, ಏಪ್ರಿಲ್ 9, 2011

ಎದೆಯ ಹಾಡು

ಎದೆಯಲ್ಲಿ ಹಾಡುವ ಈ ಹಾಡು
ಎಷ್ಟು ಹಾಡಿದರೂ ಎಷ್ಟು ಕೇಳಿದರೂ
ಎನಗರಿವಿಲ್ಲದೆಯೆ ಮತ್ತೆ ಹಾಡಿತು ಪಲ್ಲವಿ.

ಚೆಂದ ಚೆಂದದ ಚೂಡಿ
ತೊಟ್ಟಿ ಮಾಡಿದೆ ಮೋಡಿ
ಬೆರಗಾದ ಮಳೆಬಿಲ್ಲ ವರ್ಣ

ಅಂದ ಅಂದದ ಮೊಗಕೆ
ಚಂದ್ರಕಾತಿಯ ಹೊದಿಕೆ
ಮಾಯವಾದ ಬಾನ ಚಂದ್ರ

ಗಂಧ ಗಂಧದ ನಗುವು
ನಗಲಾರದೇನೋ ಮಗುವು
ಉಳಿದ ಸದ್ದೆಲ್ಲಾ ಸ್ತಬ್ಧ

ಜನ್ಮ ಜನ್ಮದ ಒಲವು
ಸರಿಸಾಟಿಯಿಲ್ಲದ ಚೆಲುವು
ಎಂದೆಂದೂ ನಿನ್ನದೇ ಹಾಡು.

              --- ಗುಬ್ಬಚ್ಚಿ ಸತೀಶ್.

("ಮಳೆಯಾಗು ನೀ" ಕವನ ಸಂಕಲದಿಂದ)

8 ಕಾಮೆಂಟ್‌ಗಳು:

  1. ಕನಸಿನ ಕಣ್ಣಿಗೆ ಒಳ್ಳೆಯದಾಗಲಿ..ಸುಂದರ ಕವನಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಕನಸಿಗೂ ಒಂದು ಕಣ್ಣೀರುತ್ತೇ ಅಲ್ವಾ ಸಾರ್. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ಅಂದ ಅಂದದ ಮೊಗಕೆ
    ಚಂದ್ರಕಾತಿಯ ಹೊದಿಕೆ... Wah Wah Yes line bardidira sir tumba ishta aytu ;-)

    ಪ್ರತ್ಯುತ್ತರಅಳಿಸಿ
  4. ಅವಳು ಎಷ್ಟಾದರೂ ಚಂದ್ರಮುಖಿಯಲ್ಲವೇ. ನಿಮ್ಮ ಕಾಮೆಂಟಿಗೆ ನನ್ನ ನಮನಗಳು.

    ಪ್ರತ್ಯುತ್ತರಅಳಿಸಿ

ಹಿರಿತನ (ನ್ಯಾನೋ ಕತೆ)

ಯತೀಶ, ಆನಂದ, ಲಿಂಗಪ್ಪ, ರಾಜ ಎಲ್ಲಾ ಹೇಗಿದ್ದೀರ? ಏನು ಓದುದ್ರಿ? ಏನು ಬರೆದ್ರಿ? ಎನ್ನುತ್ತಲೇ ಕಾಫಿ ಬಾರಿಗೆ ಬರುತ್ತಿದ್ದ ಹಿರಿಯ ಸಾಹಿತಿಗಳನ್ನು ಕಂಡ ಕೂಡಲೇ ಅಲ್ಲಿದ್ದ ...