ಪೋಸ್ಟ್‌ಗಳು

ಏಪ್ರಿಲ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಳೆಯೆಂದರೆ. . . ಮಳೆಯಾ? ಎಲ್ಲವೂ ಅಸ್ಪಷ್ಟ!

ಅಂದು ಸೆಂಪ್ಟಂಬರ್ 24, 2010 ಶುಕ್ರವಾರ. ನನ್ನ ಪಾಲಿಗದು ಶುಭ ಶುಕ್ರವಾರವೇ! ಏಕೆಂದರೆ, ಅಂದು aiಐದು ದಿನಗಳಿಂದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವೈದ್ಯರ ಗಮನದಲ್ಲಿದ್ದವನು, ಥೈರಾಯ್ಡ್ ಸಮಸ್ಯೆಯಿಂದ ಹೀಗಾಗಿದೆ ಅಷ್ಟೆ ಎಂದು ಸರ್ಟಿಫಿಕೇಟ್ ಪಡೆದುಕೊಂಡು ಡಿಸ್ಚಾರ್ಜ್ ಆಗಿದ್ದೆ.

ಸರಿಯಾಗಿ ಐದು ದಿನಗಳ ಹಿಂದೆ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದೆ. ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ ನನ್ನನ್ನು ಗೆಳೆಯರ ಸಲಹೆಯಂತೆ ನನ್ನಾಕೆಯು 108 ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಳಂತೆ. ಅಲ್ಲಿ ನನ್ನ ಮೇಲುಸ್ತುವಾರಿ ನೋಡಿಕೊಳ್ಳುವ "ಏಂಜೆಲ್" ಎಂದೇ ನಾವು ಕರೆಯುವ ಲೇಡಿ ಡಾಕ್ಟರ್‍ಗೆ ಇವಳು ಫೋನಿನಲ್ಲಿ ವಿಷಯ ತಿಳಿಸಿ, ಅವರನ್ನು ಬರಮಾಡಿಕೊಂಡಳಂತೆ. ಅವರು ಬಂದವರೇ ಎಮರ್ಜೆನ್ಸಿ ವಾರ್ಡಿನಲ್ಲಿ ಚಿಕಿತ್ಸೆ ಕೊಡಿಸಿ, ನನ್ನನ್ನು ತುರ್ತು ನಿಗಾದಲ್ಲಿ ಇಟ್ಟಿದ್ದರಂತೆ. ಮಂಗಳವಾರ ಬೆಳಿಗ್ಗೆ ಆ ಏಂಜೆಲ್ “‘ನಿಮಗೆ ಏನೂ ಆಗಿಲ್ಲ, ಆರಾಮವಾಗಿರಿ” ಎಂದು ನಗುಮೊಗದಿಂದ ಹೇಳಿ ಹೋದರು.

ಬಹಳ ಹೊತ್ತು ಮೌನದಲ್ಲಿದ್ದು, ನನ್ನವಳೆಡೆಗೆ ತಿರುಗಿ "ನನಗೆ ಏನಾಗಿದೆ?" ಎಂದು ಕೇಳಿದೆನು. ಅವಳು ಮುಗುಳ್ನಗುತ್ತಾ, "ಏನೂ ಇಲ್ಲಾ, ನಿಮಗೆ ಈ ಹಿಂದೆ ಕೊಟ್ಟಿದ್ದ ಮತ್ತು ಈಗ ಕೊಡುತ್ತಿದ್ದ ಮಾತ್ರೆಗಳಿಂದ, ಮೊದಲೇ ಸಮಸ್ಯೆಯಿದ್ದ ಥೈರಾಯ್ಡ್ ಮತ್ತೆ ತೊಂದರೆ ಮಾಡಿದೆ ಅಷ್ಟೆ. ನೀವ…

ಎದೆಯ ಹಾಡು

ಎದೆಯಲ್ಲಿ ಹಾಡುವ ಈ ಹಾಡು
ಎಷ್ಟು ಹಾಡಿದರೂ ಎಷ್ಟು ಕೇಳಿದರೂ
ಎನಗರಿವಿಲ್ಲದೆಯೆ ಮತ್ತೆ ಹಾಡಿತು ಪಲ್ಲವಿ.

ಚೆಂದ ಚೆಂದದ ಚೂಡಿ
ತೊಟ್ಟಿ ಮಾಡಿದೆ ಮೋಡಿ
ಬೆರಗಾದ ಮಳೆಬಿಲ್ಲ ವರ್ಣ

ಅಂದ ಅಂದದ ಮೊಗಕೆ
ಚಂದ್ರಕಾತಿಯ ಹೊದಿಕೆ
ಮಾಯವಾದ ಬಾನ ಚಂದ್ರ

ಗಂಧ ಗಂಧದ ನಗುವು
ನಗಲಾರದೇನೋ ಮಗುವು
ಉಳಿದ ಸದ್ದೆಲ್ಲಾ ಸ್ತಬ್ಧ

ಜನ್ಮ ಜನ್ಮದ ಒಲವು
ಸರಿಸಾಟಿಯಿಲ್ಲದ ಚೆಲುವು
ಎಂದೆಂದೂ ನಿನ್ನದೇ ಹಾಡು.

              --- ಗುಬ್ಬಚ್ಚಿ ಸತೀಶ್.

("ಮಳೆಯಾಗು ನೀ" ಕವನ ಸಂಕಲದಿಂದ)

ಕ್ರಿಕೆಟ್ ವಿಶ್ವಕಪ್ ೨೦೧೧ ಸುಪ್ರಭಾತ

ಯುವ ಭಾರತ ಯುವ ಭಾರತ
ಯುವ ಭಾರತದ ಕ್ರಿಕೆಟ್ ಕಲಿಗಳೇ
೧೯೮೩ ವಿಶ್ವಕಪ್‍ನ ವಿಜೇತರೆ
ಈ ಬಾರಿಯೂ ಗೆಲ್ಲಿರಿ ನಮ್ಮ ಹುಲಿಗಳೇ

ಹುರಿದುಂಬಿಸಲು ಧೋನಿ ಮಹಾರಾಜನು
ಬಾಲಿಗೊಂದು ಸಿಕ್ಸರ್ ಎತ್ತಲಿ ಯುವರಾಜನು
ಮೊದಮೊದಲೇ ಚಚ್ಚಲಿ ಸಚಿನ್ನ! ಸೆಹವಾಗನು
ಜೊತೆಗೆ ಸಾಥ್ ನೀಡಲಿ ಗೌತಮ ಗಂಭೀರನು

ಬಿರುಗಾಳಿ ಚಂಡೆಸೆಯಲಿ ಜಹೀರ್, ಮುನಾಫನು
ಸುಂಟರಗಾಳಿ ಚೆಂಡಲಿಡಲಿ ಹರಭಜನನು
ಜೊತೆಜೊತೆಯಲೇ ಮಿಂಚಲು ಎಲ್ಲಾ ಬೌಲರ್‍ಗಳು
ಆಲ್‍ರೌಂಡರ್‍ಗಳ ಮಹಾಪೂರವೇ ಕೈ ಜೋಡಿಸುವರು

ನಾವೆಲ್ಲರೂ ನಿಮ್ಮೊಂದಿಗೆ, ನಾವೆಲ್ಲರೂ ನಿಮ್ಮೊಂದಿಗೆ
ಈ ಬಾರಿಯ ವಿಶ್ವಕಪ್ ನಮ್ಮದಾಗಲಿ
ಇಡೀ ವಿಶ್ವವೇ ಕೊಂಡಾಡಲಿ ನಮ್ಮ ವಿಜಯವ
ಎಲ್ಲರೂ ಹಾರಿಸಲಿ ನಮ್ಮ ತ್ರಿವರ್ಣ ಧ್ವಜವ

                                           - ಗುಬ್ಬಚ್ಚಿ ಸತೀಶ್.