ಬ್ಲಾಗ್ ಆರ್ಕೈವ್

ಶುಕ್ರವಾರ, ಜನವರಿ 21, 2011

ಅವಳ ಬೈಸಿಕಲ್ಲು“ಬರುತ್ತೇನೆ” ಎಂದವಳಿಗೆ
ಹೋಗುವ ಮನಸ್ಸಿಲ್ಲ
ಆದರೂ ಹೋಗಲೇಬೇಕು
ಅಮ್ಮ ಬೇಗ ಬಾ ಎಂದಿದ್ದಾಳೆ
ಇಷ್ಟಕ್ಕೂ ಇವಳು ಹೇಳಿ
ಬಂದಿರುವುದು, ಗೆಳತಿಯ ಮನೆಗೆಂಬ
ಹಸಿಸುಳ್ಳು. ಆ ದಿನದ
“ದಿನಕ್ಕೊಂದು” ಹೊಸಸುಳ್ಳು!

ಸಿನಿಮಾ ಮುಗಿದರೂ
ಎಳಲೊಲ್ಲದ ಜನರಂತೆ
ಎದ್ದವಳು, ನಡಿಗೆಯಲ್ಲೇ ತೆವಳಿ
ಅವಳ ಬೈಸಿಕಲ್ಲಿನ ಬೀಗಕ್ಕೆ
ಕೀ ಹಚ್ಚಿ, ನನ್ನೆಡೆಗೆ ತಿರುಗಿ
ಕಣ್ಣಲೇ “ಮತ್ತೆ ಬರುತ್ತೇನೆ”
ಎಂದು ಸೈಕಲ್ ಹತ್ತಿದಳು.
ಮತ್ತೊಂದು ಷೋನ ಟಿಕೆಟಿಗಾಗಿ
ನಿಂತವನಂತೆ ನಾನು ನಿಂತೇ ಇದ್ದೆ!

ನನ್ನ ಕಣ್ಣಿಂದ ಬೇಗ
ಮರೆಯಾಗಲಿಚ್ಚಿಸದ
ಬೈಸಿಕಲ್ಲೂ-ಅವಳೂ
ನಿಧಾನವಾಗಿ ನನ್ನಿಂದ
ಸ್ವಲ್ಪ-ಸ್ವಲ್ಪ ದೂರವಾಗುತ್ತಿದ್ದಾರೆ
ಬೈಸಿಕಲ್ಲು ಅವಳದ್ದೆ, ಆದರದು
ನನ್ನ ಮನಸ್ಸು!

ಮತ್ತವಳು, ತನ್ನ
ಬೈಸಿಕಲ್ಲಿನ ಮೇಲೆ
ಹಿಂದಿರುಗಿ ಬರುವ ತನಕ
ನನ್ನ ಮನಸ್ಸು
ಅವಳ ಬೈಸಿಕಲ್ಲು!

- ಗುಬ್ಬಚ್ಚಿ ಸತೀಶ್.

8 ಕಾಮೆಂಟ್‌ಗಳು:

 1. hmm sathish chenaagi bandide ri..
  ondu baysikkalla photkke sundara kalpane maadiddira...

  ಹಿಂದಿರುಗಿ ಬರುವ ತನಕ
  ನನ್ನ ಮನಸ್ಸು
  ಅವಳ ಬೈಸಿಕಲ್ಲು!

  ಪ್ರತ್ಯುತ್ತರಅಳಿಸಿ
 2. ತರುಣ್, ಕವನಕ್ಕೆ ಚಿತ್ರ ನೆಟ್‍ನಲ್ಲಿ ಹುಡುಕ್ಕಿದ್ದು.
  ಥ್ಯಾಂಕ್ಸ್.

  ಪ್ರತ್ಯುತ್ತರಅಳಿಸಿ
 3. ಗುಬ್ಬಚ್ಚಿ ಸತೀಶ್,
  ಕವನ ಬರೆಯಲು ಬೈಸಿಕಲ್ಲು ಕೂಡ ವಸ್ತುವಾಗಿದೆ ಇಲ್ಲಿ ಗುಡ್..

  ಬೈಸಿಕಲ್ಲು ಅವಳದ್ದೆ, ಆದರದು
  ನನ್ನ ಮನಸ್ಸು!


  ಹಿಂದಿರುಗಿ ಬರುವ ತನಕ
  ನನ್ನ ಮನಸ್ಸು
  ಅವಳ ಬೈಸಿಕಲ್ಲು!

  ಈ ತರಹದ ವೈಸಿ-ವರ್ಷ ಒಂಥ ಹೊಸತೆನೆಸಿತು..

  ಪ್ರತ್ಯುತ್ತರಅಳಿಸಿ
 4. ಥ್ಯಾಂಕ್ಸ್ ಶಿವು ಸರ್. ನೀವು ಮಲ್ಲಿಯವರ ಪುಸ್ತಕ ಬಿಡುಗಡೆಯ ಪೋಟೋಗಳನ್ನು ಚೆನ್ನಾಗಿ ತೆಗೆದಿದ್ದೀರಿ.

  ಪ್ರತ್ಯುತ್ತರಅಳಿಸಿ
 5. ಗುಬ್ಬಚ್ಚಿ ಸತೀಶ್...

  ಅವಳು..
  ಮತ್ತು.
  ಅವಳ..
  ನೆನಪುಗಳೇ.. ಹಾಗೆ..
  ಸವಾರಿ ಮಾಡುತ್ತವೆ..
  ನನ್ನ..
  ಮನದಮೇಲೆ..

  ಸಕತ್ ಕವನ... ಇಷ್ಟವಾಯಿತು..

  ನಿಮ್ಮ ಪುಸ್ತಕದ ತಯಾರಿ ಎಲ್ಲಿಯವರೆಗೆ ಬಂದಿತು..
  ಬಿಡುಗಡೆಯ ದಿನಾಂಕ ನಮಗೂ ತಿಳಿಸಿ..

  ಪ್ರತ್ಯುತ್ತರಅಳಿಸಿ
 6. ಖಂಡಿತ ಪ್ರಕಾಶಣ್ಣ. ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 7. ಸತೀಶ್ ಇದು ಸಕ್ಕತ್ ಸೈಕಲ್ಲಿಂಗ್ ಕವನ....ಹಹಹ ಒಳ್ಲೆಯ ಉಪಮೆ...ಮನಸು ಸೈಕಲ್ಲು..ಎರಡನೇ ಪಾದದ ಎರಡನೇ ಸಾಲು..ಏಳಲೊಲ್ಲದ ಅಂತ...ಇರ್ಬೇಕಿತ್ತು ಅಲ್ವಾ..?

  ಪ್ರತ್ಯುತ್ತರಅಳಿಸಿ
 8. ಹೌದು ಅಜಾದ್ ಸರ್. ಅದು ಸಂಕಲನದಲ್ಲಿ ಸರಿಯೋಗಿದೆ. ತಪ್ಪಿಗೆ ಕ್ಷಮಿಸಿ.

  ಪ್ರತ್ಯುತ್ತರಅಳಿಸಿ