ಪೋಸ್ಟ್‌ಗಳು

ಆಗಸ್ಟ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಣ್ಣನ ಜನುಮದಿನ

ಅಣ್ಣಾ, ಇಂದು ನಿಮ್ಮ ಜನುಮದಿನ

ಈ ಪುಟ್ಟ ತಂಗಿಯ ಸಂಭ್ರಮದ ದಿನ

ಅಪ್ಪ ಅಮ್ಮನ ಪ್ರೀತಿಗೆ ಗರಿಯಿಟ್ಟ ದಿನ

ನಮ್ಮೆಲ್ಲರಿಗೂ ಇದುವೇ ಶುಭದಿನ !


ಕಣ್ಣ ಮುಂದೆಯೇ ಇದೇ

ಮೈಸೂರು ಕಾಣದ ದಸರಾ

ನಿಮ್ಮ ಬೆನ್ನ ಮೇಲೆ ನನ್ನ ಅಂಬಾರಿ


ಇಂದೂ ಕೂಡ ಹೊಳೆಯುತ್ತಿದೆ !

ಅಪ್ಪ ಬೈದಾಗ, ಅಮ್ಮ ಹೊಡೆದಾಗ

ನೀವು ಸಂತೈಸಿ ಹಣೆಗಿಟ್ಟ ಮುತ್ತು !


ಇವತ್ತಿಗೂ ಹಸಿಯಾಗಿಯೇ ಇದೇ

ನಾ ಜಾರಿಬಿದ್ದಾಗ, ಕಾಲೆಡವಿದಾಗ

ಕಣ್ಣೀರ ಸುರಿಸುತ್ತಾ, ನೀವು ಹಚ್ಚಿದ ಎಂಜಲು !


ದಿನದಿನವೂ ಸಿಹಿ ಹೆಚ್ಚುತ್ತಲೇ ಇದೇ

ಕದ್ದು ನಾವಿಬ್ಬರೇ ಮೇಯ್ದ ಕೊಬ್ಬರಿ ಬೆಲ್ಲ

ನೀವು ಗೋಳಾಡಿಸಿ ಕೊಟ್ಟ ಚಾಕ್ ಲೇಟ್!


ಪ್ರತಿ ಹೆಜ್ಜೆಯಲ್ಲೂ ಬೆಳಕಾಗಿಯೇ ಇದೆ

ಕತ್ತಲಲ್ಲಿ ನಾ ತಪ್ಪೆಜ್ಜೆಯಿಟ್ಟಾಗ

ನೀವು ಹಚ್ಚಿಟ್ಟ ದೀಪ!


ಅಣ್ಣಾ, ಇಂದು ನಿಮ್ಮ ಜನುಮದಿನ

ಅದೇಕೋ ಕಾಣೇ ಆನಂದ ಬಾಷ್ಪ

ನೀವು ಪ್ರೀತಿಯಿಂದ ಒರೆಸಲೆಂದಿರಬೇಕು!

ಆರೋಗ್ಯ, ಐಶ್ವರ್ಯದಿಂದ ನೀವು

ನೂರಾರು ವರುಷ ಹರುಷದಿಂದ ಬಾಳಬೇಕು.

                             ನಿಮ್ಮ ಮುದ್ದಿನ

                             ಪೆದ್ದು ಪೆದ್ದಾದ

                                  ತಂಗಿ

ಸ್ನೇಹ ಮಾಡಬೇಕಿಂಥವಳಾ...

ಅಂದು ಭಾನುವಾರ. ಸಂಜೆ ಗೆಳೆಯನೊಬ್ಬನ ನಿರೀಕ್ಷೆಯಲ್ಲಿದ್ದೆ. ಆತ ಹತ್ತಿರದ ನರ್ಸಿಂಗ್ ಹೋಂನಲ್ಲಿ ಸಿಗುತ್ತೇನೆ ಎಂದಿದ್ದ. ಆತನು ಅಲ್ಲಿಗೆ ಬರುವ ಮುಂಚೆಯೇ ನಾನಲ್ಲಿದ್ದೆ. ಎಷ್ಟು ಹೊತ್ತಾದರು ಆತ ಅಲ್ಲಿಗೆ ಬರಲೇ ಇಲ್ಲ. ಬರತ್ತೇನೆ ಎಂದ ಮೇಲೆ ಬಂದೇ ಬರುತ್ತಾನೆ ಎಂದು ನಾನು ಅಲ್ಲಿಯೇ ಕಾಯುತ್ತಾ ಕುಳಿತೆ.

ಆತನ ನಿರೀಕ್ಷೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಅದಾಗಲೇ ರಾತ್ರಿ ಒಂಭತ್ತಾಗಿತ್ತು. ನಮ್ಮ ಏರಿಯಾಗೆ ಹೋಗುವ ಕಡೆಯ ಸಿಟಿಬಸ್ ನರ್ಸಿಂಗ್ ಹೋಂನ ಸ್ಟಾಪ್‍ನಿಂದ ಹೋಗಿ ಅರ್ಧಗಂಟೆಯಾಗಿತ್ತು. ನನಗೆ ಊಟ ಮಾಡುವುದಕ್ಕೂ ಮನಸ್ಸಿರಲಿಲ್ಲ. ಅಷ್ಟಕ್ಕೂ ಬರುತ್ತೇನೆಂದ ಗೆಳೆಯ ಬರಬೇಕು ಅಷ್ಟೆ. ನನ್ನ ಭಾಷೆಯಲ್ಲಿ ಗೆಳೆತನವೆಂದರೆ ನಂಬಿಕೆಯಷ್ಟೆ. ಅವನು ಬರುವವರೆಗೂ ಕಾಯಬೇಕೆಂದು ಅದೇ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತಿದ್ದ ಪರಿಚಯದವರನ್ನು ಮಲಗಲು ಸ್ವಲ್ಪ ಜಾಗ ಸಿಗುತ್ತದಾ ಎಂದು ಕೇಳಿದೆ. ಅವರು ಆಗಲಿ ಎಂದರು. ಸ್ವಲ್ಪ ಸಮಾಧಾನವಾಯಿತು. ನರ್ಸಿಂಗ್ ಹೋಮಿನ ವರಾಂಡದಲ್ಲಿ ಅಡ್ಡಾಡತೊಡಗಿದೆ.

ಅದು ಚಿಕ್ಕದಾದ, ಚೊಕ್ಕವಾದ ನರ್ಸಿಂಗ್ ಹೋಂ. ಎಲ್ಲಾ ರೂಂಗಳೂ ಭರ್ತಿಯಾದಂತೆ ಕಾಣುತ್ತಿತ್ತು. ಒಂದು ರೂಮಿನಲ್ಲಿ ಯಾರೂ ಇರಲಿಲ್ಲದ್ದು ತೆರೆದ ಬಾಗಿಲಿನಿಂದ ಸ್ಪಷ್ಟವಾಗಿತ್ತು. ಆ ರೂಮಿನಲ್ಲಿ ಎರಡು ಮಂಚಗಳಿದ್ದವು. ಭಾಗಶಃ ಒಂದು ರೂಮಿಗೆ ಇಬ್ಬರು ಪೇಶಂಟ್ ಗಳು ಇರಬೇಕು. ಗೆಳೆಯ ಬಂದಂತೆ ಕಾಣಲಿಲ್ಲ. ಅಲ್ಲಿದ್ದ ಖಾಲಿ ರೂಂ ಅದೊಂದೇ ಎಂದೆನಿಸಿದ್ದರಿಂದ, ನನಗೆ ಅಲ್ಲಿ…